ಶಿಷ್ಯವೇತನ ಮತ್ತು ಮಾಸಾಶನ

ಶಿಷ್ಯವೇತನ

ಸಂಗೀತ ನೃತ್ಯ ಕ್ಷೇತ್ರದಲ್ಲಿ ಕಲಿಯುತ್ತಿರುವ ಅಭ್ಯರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಉತ್ತೇಜಿಸಿ, ಅವರ ಕ್ಷೇತ್ರಗಳ್ಲಲಿ ಬೆಳೆಯುವಂತೆ ಮಾಡಲು ಪ್ರತಿ ವರ್ಷ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕಲಾಪ್ರಕಾರಗಳಲ್ಲಿ ಶಿಷ್ಯವೇತನ ನೀಡಲಾಗುವುದು. ಪ್ರಮುಖ ದಿನಪತ್ರಿಕೆಗಳೇ ಅಲ್ಲದೆ ಗ್ರಾಮಾಂತರ ಪತ್ರಿಕೆಗಳಲ್ಲಿಯೂ ಹಾಗೂ ಅಕಾಡೆಮಿಯ ಅಂತರ್ಜಾಲದಲ್ಲಿಯೂ ಈ ಬಗ್ಗೆ ಪ್ರಕಟಣೆ ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸಂದರ್ಶನಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳ ಪ್ರತಿಭೆಯನ್ನು ಆದರಿಸಿ ಆಯ್ಕೆ ಮಾಡಲಾಗುತ್ತದೆ, ಇದಕ್ಕಾಗಿ ಪ್ರತಿ ವಿಷಯದಲ್ಲಿ ಮೂರು ತಜ್ಞ ಹಿರಿಯ ಕಲಾವಿದರು ಆಯ್ಕೆ ಸಮಿತಿಯಲ್ಲಿರುತ್ತಾರೆ, ಅವರ ತೀರ್ಮಾನವೇ ಅಂತಿಮವಾಗಿರುತ್ತದೆ.

ಆಯ್ಕೆ ಸಮಿತಿಯ ತೀರ್ಮಾನದಂತೆ ಶಿಷ್ವೇತನಕ್ಕೆ ಅಭ್ಯರ್ಥಗಳನ್ನು ಆಯ್ಕೆ ಮಾಡಿ ತಲಾ ರೂ 10,000-00ಗಳಂತೆ ಶಿಷ್ಯವೇತನ ಪಾವತಿಸಲಾಗುವುದು.

ಮಾಸಾಶನ

58 ವರ್ಷ ಮೇಲ್ಪಟ್ಟ ಕಲಾವಿದರಿಂದ ಆಯಾಯ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಂದ ಶಿಫಾರಿಸಲ್ಪಟ್ಟ ಅರ್ಜಿಗಳನ್ನು ಅಕಾಡೆಮಿಯಲ್ಲಿ ಸ್ವೀಕರಿಸಿ,ಎಲ್ಲಾ ಪ್ರಕಾರಗಳ ತಜ್ಞರ, ಅಕಾಡೆಮಿಯ ಅಧ್ಯಕ್ಷರ, ರಿಜಿಸ್ಟ್ರಾರರ ಹಾಗೂ ಜಿಲ್ಲಾ ಸ್ದಸ್ಯ ಸಂಚಾಲಕರ ಸಮ್ಮುಖದಲ್ಲಿ ಕಲಾವಿದರ ಸಂದರ್ಶನ ನಡೆಸಿ, ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಕಲಾವಿದರ ಪಟ್ಟಿಯನ್ನು ಹಾಗೂ ಅರ್ಜಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಮುಂದಿನ ಕ್ರಮಕ್ಕೆ ರವಾನಿಸಲಾಗುತ್ತದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಆಯ್ಕೆ ಪ್ರಕ್ರಿಯೆ ಮಾತ್ರ ಪೂರೈಸಿ ಶಿಫಾರಸ್ಸು ಮಾಡುವ ಸಂಸ್ಥೆಯಾಗಿರುತ್ತದೆ, ಮಾಸಾಶನ ಮಂಜೂರು ಮಾಡುವ ಸಂಸ್ಥೆಯಲ್ಲ.