ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು

ಸಂಗೀತ ನೃತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಸಾಧಕರನ್ನು ಗುರುತಿಸಿ, 2017-18ನೇ ಸಾಲಿನಲ್ಲಿ ಈ ಸಾಧಕರನ್ನು ಕರ್ನಾಟಕ ಕಲಾಶ್ರೀ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ.

ಗೌರವ ಪ್ರಶಸ್ತಿ

ಡಾ. ಸುಕನ್ಯಾ ಪ್ರಭಾಕರ್, ಮೈಸೂರು,
ಕರ್ನಾಟಕ ಸಂಗೀತ-ಹಾಡುಗಾರಿಕೆ

ಡಾ.ಸುಕನ್ಯಾ ಪ್ರಭಾಕರ್ ದಿನಾಂಕ 14.02.1952ರಲ್ಲಿ ಪಿರಿಯಾಪಟ್ಟಣದಲ್ಲಿ ಶ್ರೀ ಸುಬ್ಬರಾವ್ ಮತ್ತು ಶ್ರೀಮತಿ ಲಕ್ಷ್ಮಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು. ತಾಯಿಯವರಿಂದಲೇ ಸಂಗೀತದ ಆರಂಭಿಕ ಶಿಕ್ಷಣ. ನಂತರ ಶ್ರೀಮತಿ ಗೌರಿ ಕುಪ್ಪಸ್ವಾಮಿ, ಪೆÇ್ರ. ವಿ.ರಾಮರತ್ನಂ ಹಾಗೂ ನಾಗರತ್ನ ಸದಾಶಿವ ಅವರಿಂದ ಹೆಚ್ಚಿನ ಶಿಕ್ಷಣ. ಸಂಗೀತದಲ್ಲಿ ಬಿ.ಎ. ಮತ್ತು ಎಂ.ಎ. ಪದವಿಗಳ ಜೊತೆಗೆ ವಿದ್ವತ್ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶದ ಸಾಧನೆ. ಶ್ರೀ ಬಿ.ಎಸ್.ವಿಜಯರಾಘವನ್ ಮತ್ತು ಶ್ರೀ ವಿ.ನಂಜುಂಡಸ್ವಾಮಿಯವರ ಮಾರ್ಗದರ್ಶನದಲ್ಲಿ `ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ’ ಎಂಬ ವಿಷಯದಲ್ಲಿ ಅಧ್ಯಯನ ಮಾಡಿ ಪಿಹೆಚ್.ಡಿ ಪದವಿಯನ್ನೂ ಗಳಿಸಿಕೊಂಡಿದ್ದಾರೆ.

ಸುರಭಿ, ನಂ.1225,10ನೇ ಮುಖ್ಯ ರಸ್ತೆ 3ನೇ ಹಂತ, ಗೋಕುಲಂ ಮೈಸೂರು-570002
ದೂ: 94804 77299

ಶ್ರೀಮತಿ ಶಾರದಾಮಣಿ ಶೇಖರ್, ಮಂಗಳೂರು
ನೃತ್ಯ

ಭರತನಾಟ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕಿಯಾಗಿ ಗೌರವದ ಸ್ಥಾನವನ್ನು ಗಳಿಸಿಕೊಂಡಿರುವ ಶ್ರೀಮತಿ ಶಾರದಾಮಣಿ ಶೇಖರ್, ಕೂಚಿಪುಡಿ,ಕರ್ನಾಟಕ ಶಾಸ್ತ್ರೀಯ ಸಂಗೀತ-ಹೀಗೆ ಪೂರಕ ಮಾಧ್ಯಮಗಳಲ್ಲೂ ಕ್ರಮಬದ್ಧ ಶಿಕ್ಷಣ ಪಡೆದುಕೊಂಡವರು. ನಾಟ್ಯಾಚಾರ್ಯ ಶ್ರೀ ಉಲ್ಲಾಳ್ಮೋ ಹನ್ ಕುಮಾರ್ ಮತ್ತು ನಾಟ್ಯಾಚಾರ್ಯ ಶ್ರೀ ಕೆ. ಮುರುಳೀದರ ರಾವ್ ಅವರಲ್ಲಿ ಭರತನಾಟ್ಯದಲ್ಲಿ ಶಿಕ್ಷಣ ಪಡೆದ ಶಾರದಾ ಮಣಿಯವರು,ಹೈದರಾಬಾದಿನಲ್ಲಿ ಗುರು ಶ್ರೀಮತಿ ಶೋಭಾ ನಾಯ್ಡು ಮತ್ತು ಬೆಂಗಳೂರಿನ ಶ್ರೀಮತಿ ಬಿ.ಎಸ್. ಸುನಂದಾದೇವಿಯವರಲ್ಲಿ ಕೂಚಿಪುಡಿ ನೃತ್ಯಶೈಲಿಯಲ್ಲಿ ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ತಮ್ಮ ತಂದೆ ವಿದ್ವಾನ್ ಎನ್.ಕೆ. ಸುಂದಾರಾಚಾರ್ಯ ಮತ್ತು ವಿದ್ವಾನ್ ಶ್ರೀನಾಥ್ಮರಾಠೆ ಅವರುಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಣವನ್ನು ಪಡೆದಿದ್ದಾರೆ.

ಶ್ರೀಮತಿ ಶಾರದಾಮಣಿ ಶೇಖರ್ ಸನಾತನ ನಾಟ್ಯಾಲಯ, 4-1-12,ಶ್ರೀದೇವಿ ಕಾಲೇಜು ರಸ್ತೆ, ಬಲ್ಲಾಳ್‍ಬಾಗ್
ಮಂಗಳೂರು-575 003 ದೂ:

ವಾರ್ಷಿಕ ಪ್ರಶಸ್ತಿ

ಶ್ರೀ ಪಿ. ರಾಮಪ್ಪ ನಾಯ್ಡು, ಕೋಲಾರ
ಕರ್ನಾಟಕ ಸಂಗೀತ-ಹಾಡುಗಾರಿಕೆ

ಕೋಲಾರ ಜಿಲ್ಲೆ ರಾಯಲಪಾಡುವಿನಲ್ಲಿ ದಿನಾಂಕ 07.11.1927ರಲ್ಲಿ ಶ್ರೀ ಪಿ.ರಾಮಯ್ಯ-ಶ್ರೀಮತಿ ಅಚ್ಚಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀ ಪಿ.ರಾಮಪ್ಪ ನಾಯ್ಡು, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ, ಕಲಾವಿದರಾಗಿ ತೊಡಗಿಸಿಕೊಂಡವರು. 1942ರಲ್ಲಿ ನಡೆದ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶ್ರೀ ವಿನೋಬಾ ಭಾವೆಯವರ ಭೂದಾನ ಚಳವಳಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು

ಶ್ರೀ ಪಿ.ರಾಮಪ್ಪ ನಾಯ್ಡು ರಾಯಲಪಾಡು - 563134 ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ
ದೂ: 90080 ‑62707

ಡಾ. ಎಸ್. ವಿಜಯರಾಘವನ್, ಮೈಸೂರು
ಕರ್ನಾಟಕ ಸಂಗೀತ - ವೀಣೆ

ದಿನಾಂಕ 10.06.1947ರಲ್ಲಿ ವಿದ್ವಾನ್ ಎಸ್.ವಿ. ಶ್ರೀನಿವಾಸ ಅಯ್ಯಂಗಾರ್ ಅವರ ಸುಪುತ್ರರಾಗಿ ಜನಿಸಿದ ಡಾ. ಎಸ್.ವಿಜಯರಾಘವನ್, ಮೂಲತಃ ವೈದ್ಯರು. ಮೈಸೂರು ವಿಶ್ವವಿದ್ಯಾಲಯದ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ಡೀನ್ ಆಗಿ, ಮೈಸೂರಿನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯಗಳ ಔಷಧಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಡಾ.ಎಸ್.ವಿಜಯರಾಘವನ್ನಂ .514/ಎನ್, 3ನೇ ಅಡ್ಡರಸ್ತೆ ಮಾರುತಿ ದೇವಸ್ಥಾನದ ರಸ್ತೆ ಸರಸ್ವತಿಪುರಂ, ಟಿ.ಕೆ. ಬಡಾವಣೆ ಮೈಸೂರು - 570009 ದೂ: 98806 92310

ಶ್ರೀ ಕೆ.ಎಸ್. ಮೋಹನಕುಮಾರ್, ಭದ್ರಾವತಿ
ಕರ್ನಾಟಕ ಸಂಗೀತ - ನಾದಸ್ವರ

ಶ್ರೀ ಕೆ.ಎಸ್. ಮೋಹನಕುಮಾರ್ ದಿನಾಂಕ 14.05.1954ರಂದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಗಾಮ ಎಂಬ ಸಣ್ಣ ಹಳ್ಳಿಯಲ್ಲಿ ನಾದಸ್ವರ ವಿದ್ವಾಂಸರಾದ ಶ್ರೀ ಕೆ. ಮಂಜಪ್ಪ ಮತ್ತು ಶ್ರೀಮತಿ ಶಾರದಮ್ಮ ದಂಪತಿಯ ಮಗನಾಗಿ ಜನಿಸಿದರು. ಕುಟುಂಬದ ಎಲ್ಲರೂ ಪಾರಂಪರಿಕವಾಗಿ ಕಲಾವಿದರೇ ಆಗಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾಡುಗಾರಿಕೆ, ನಾದಸ್ವರ, ಹಾರ್ಮೋನಿಯಂ,ಕೊಳಲು – ಹೀಗೆ ಸಾಕಷ್ಟು ವಿಭಾಗಗಳಲ್ಲಿ ಪ್ರತಿಭಾವಂತರಾಗಿರುವ ಮೋನಹ್ ಕುಮಾರ್, ತಮ್ಮ ತಂದೆಯವರಲ್ಲಿ ಆರಂಭಿಕ ಶಿಕ್ಷಣ ಪಡೆದು,ವಿದ್ವತ್ ಪದವಿಯಲಿ ಪ್ರಥಮ ಶ್ರೇಣಿಯ ಫಲಿತಾಂಶ ಪಡೆದಿರುವುದಲ್ಲದೆ, ಆಕಾಶವಾಣಿಯ ಶ್ರೇಣೀಕೃತ ಕಲಾವಿದರಾಗಿ ಮಾನ್ಯತೆ ಪಡೆದಿದ್ದಾರೆ.

ಶ್ರೀ ಕೆ.ಎಸ್. ಮೋಹನಕುಮಾರ್ ಶ್ರೀ ಮುರುಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ನಾದಬ್ರಹ್ಮ, ಪೋಸ್ಟ್ ಆಫೀಸ್ ಹಿoಭಾಗ ಉಲ್ಲಾಳು ಉಪನಗರ ಬೆಂಗಳೂರು-560110 ದೂ: 94481 93836

ಶ್ರೀ ಕಡತೋಕ ಶಂಭು ಭಟ್ಟ, ಹೊನ್ನಾವರ
ಹಿಂದೂಸ್ತಾನಿ ಸಂಗೀತ - ಬಾನ್ಸುರಿ

ಶ್ರೀ ಕಡತೋಕಾ ಶಂಭು ಭಟ್ಟ ಅವರು ದಿನಾಂಕ 13.08.1938ರಲ್ಲಿ ಸಂಸ್ಕೃತದ ಮೇರು ವಿದ್ವಾಂಸರ ಕುಟುಂಬದಲ್ಲಿ ಜನಿಸಿದವರು.ತಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಸಂಗೀತ ವಾತಾವರಣವಿಲ್ಲದಿದ್ದರೂ, ಅಂಗಡಿಯಲ್ಲಿ ಸಿಗುವ ಆಟದ ಕೊಳಲು ಹಿಡಿದು ಮೈಮರೆಯುತ್ತಿದ್ದರು. ಇವರ ಆಸಕ್ತಿಯನ್ನು ಗಮನಿಸಿದ ದತ್ತ ಮಾಸ್ತರು ಕೊಳಲು ನುಡಿಸುವುದನ್ನು ಹೇಳಿಕೊಡುತ್ತಾರೆ. ನಂತರ ಕಟ್ಟಿಗೆ ಭಟ್ಟ ಅವರಲ್ಲಿ ಶಿಕ್ಷಣ ಮುಂದುವರೆಯುತ್ತದೆ. ಆರ್.ಎನ್. ಜೋಶಿ ಬುವಾ ಅವರಲ್ಲಿ ವಿಶೇಷ ಮಾರ್ಗದರ್ಶನ ಪಡೆದ ನಂತರ ಪಂ. ವೆಂಕಟೇಶ ಗೋಡಖಿಂಡಿಯವರ ಮಾರ್ಗದರ್ಶನದಲ್ಲಿ ಮತ್ತೂ ಹೆಚ್ಚಿನ ಸಾಧನೆ ಮಾಡಿದರು. ಕರ್ನಾಟಕ ಸರ್ಕಾರದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದ ಫಲಿತಾಂಶ ಪಡೆಯುವುದಲ್ಲದೆ, ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಫಲಿತಾಂಶವನ್ನೂ ಗಳಿಸಿಕೊಂಡರು.

ಶ್ರೀ ಕಡತೋಕ ಶಂಭು ಭಟ್ಟ ತಾ:ಕುಮಟಾ-581 338 ಉತ್ತರ ಕನ್ನಡ ಜಿಲ್ಲೆ ದೂ: 90082 32532

ಶ್ರೀ ಬಿ. ಹುಸೇನ್ ಸಾಬ್ ನದಾಫ್, ಕುಂದಗೋಳ
ಹಿಂದೂಸ್ತಾನಿ ಸಂಗೀತ - ಗಾಯನ

ಶ್ರೀ ಹುಸೇನ್ ಸಾಬ್ ಅವರು ದಿನಾಂಕ 05.05.1954ರಂದು ಶ್ರೀ ಯಮನೂರು ಸಾಬ್ ಮತ್ತು ಶ್ರೀಮತಿ ಹೊನ್ನೂರು ಬಿ ದಂಪತಿ ಪುತ್ರರಾಗಿ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು ಕನಕಗಿರಿಯಲ್ಲಿ ಜನಿಸಿದರು. ಶ್ರೀ ಮುರುಗೋಡು ಕೃಷ್ಣದಾಸರು ಮತ್ತು ಶ್ರೀ ದೇವಪ್ಪಯ್ಯ ಕಾಖಂಡಕಿಯವರಲ್ಲಿ ಶಿಷ್ಯವೃತ್ತಿ ಮಾಡಿ ಸಂಗೀತ ಶಿಕ್ಷಣ ಪಡೆದರು.

ಶ್ರೀ ಹುಸೇನ ಸಾಬ್ ನದಾಫ್ಹಿ ರೇನರ್ತಿ, ಕುಂದಗೋಳ ತಾಲ್ಲೂಕು ,ಧಾರವಾಡ ಜಿಲ್ಲೆ
ದೂ: 94487 80993

ಶ್ರೀ ರಾಮಾಚಾರ್ಯ ಕಾಖಂಡಕಿ
ಹಿಂದೂಸ್ತಾನಿ ಸಂಗೀತ - ಗಾಯನ

ಶ್ರೀ ರಾಮಾಚಾರ್ಯ ಕಾಖಂಡಕಿಯವರು ಸಂಗೀತ ವಿದ್ವಾಂಸರುಗಳ ಕುಟುಂಬದಲ್ಲಿ ದಿನಾಂಕ 10.04.1949ರಲ್ಲಿ ಪಂ. ಶ್ರೀನಿವಾಸಾಚಾರ್ಯ ಕಾಖಂಡಕಿ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ದಂಪತಿಯ ಸುಪುತ್ರರಾಗಿ ಜನಿಸಿದರು. ಹಿಂದೂಸ್ತಾನಿ ಸಂಗೀತದಲ್ಲಿ ಗಾಯನ, ತಾಳ, ಹಾರ್ಮೋನಿಯಂಗಳಲ್ಲಿ ಸುಮಾರು ನೂರು ವರ್ಷಗಳ ಇತಿಹಾಸವಿರುವ ಬಹುದೊಡ್ಡ ಪರಂಪರೆಯ 6ನೇ ತಲೆಮಾರಿನವರು ಶ್ರೀ ರಾಮಾಚಾರ್ಯರು. ನಾಲ್ಕರ ಬಾಲ್ಯದಲ್ಲಿ ರಾಮಾಚಾರ್ಯರಿಗೆ ಸಂಗೀತ ಕಲಿಸುವ ಉದ್ದೇಶದಿಂದಲೇ ತಮ್ಮ ಕುಟುಂಬವನ್ನು ರಾಯಚೂರಿಗೆ ಕರೆತಂದರು ಅವರ ತಂದೆಯವರು.

ಶ್ರೀ ರಾಮಾಚಾರ್ಯ ಕಾಖಂಡಕಿ ನಂ. 9-2-13, ನೇತಾಜಿ ನಗರ ಪೊಲೀಸ್ ಠಾಣೆ ಹಿಂದೆ, ಮಡ್ಡಿಪೇಟೆ
ರಾಯಚೂರು-584 101 ದೂ : 99458 21068

ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ, ಅಮರಾವತಿ
ಹಿಂದೂಸ್ತಾನಿ ಸಂಗೀತ - ಶಹನಾಯಿ

ಶ್ರೀ ಬಸಪ್ಪ ಹನಮಪ್ಪ ಭಜಂತ್ರಿಯವರು ದಿನಾಂಕ 01.06.1953ರಂದು ಬಾಗಲಕೋಟೆ ಜಿಲ್ಲೆಯ ಅಮರಾವತಿಯಲ್ಲಿ ಜನಿಸದರು. ತಮ್ಮ 7ರ ಬಾಲ್ಯದಲ್ಲಿ ತಮ್ಮ ಅಜ್ಜನವರಾದ ಪಂಡಿತ್ ಫಕೀರಪ್ಪ ಮತ್ತು ತಂದೆ ಶ್ರೀ ಭೂಶಪ್ಪ ಭಜಂತ್ರಿ ಅವರಲ್ಲಿ ಶಹನಾಯಿ ವಾದನದಲ್ಲಿ ಕ್ರಮಬದ್ಧ ಶಿಕ್ಷಣ ಪಡೆಯುತ್ತಾರೆ. ಮುಂದೆ ಗುಳೇದಗುಡ್ಡದ ಶ್ರೀ ಭೀಮಣ್ಣ ಭರಮಪ್ಪ ಭಜಂತ್ರಿ ಅವರಿಂದ ಕ್ಲಾರಿಯೋನೆಟ್ ವಾದನದಲ್ಲಿ ಶಿಕ್ಷಣ ಪಡೆಯುತ್ತಾರೆ. ಕೆಲಕಾಲ ಪಂ.ಪುಟ್ಟರಾಜ ಗವಾಯಿಗಳ ಆಶ್ರಮದಲ್ಲೂ ಸಂಗೀತಾಭ್ಯಾಸ ಮಾಡುತ್ತಾರೆ. ಅಲ್ಲದೆ ಪಂ. ಬಸವರಾಜ ರಾಜಗುರು,ಶ್ರೀಮತಿ ಗಂಗೂಬಾಯಿ ಹಾನಗಲ್ಲ, ಪಂ.ಪಂಚಾಕ್ಷರಿ ಮತ್ತಿಕಟ್ಟಿ, ಪಂ.ಅರ್ಜುನಸಾ ನಾಕೋಡ ಮುಂತಾಗಿ ಹಲವು ಸಂಗೀತ ಸಾಧಕರ ಮಾರ್ಗದರ್ಶನ ಪಡೆದಿದ್ದಾರೆ.

ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ ಶಹನಾಯಿ, ಕ್ಲಾರಿಯೋನೆಟ್ ಮತ್ತು ಸ್ಯಾಕ್ಸಾಫೋನ್ಕ ಲಾವಿದರು ಅಮರಾವತಿ ಅಂಚೆ ತಾಲ್ಲೂಕು ಹುನಗುಂದ ಜಿಲ್ಲೆ ಬಾಗಲಕೋಟ. ದೂ: 99018 13423

ಡಾ. ಸುಪರ್ಣಾ ವೆಂಕಟೇಶ್, ಬೆಂಗಳೂರು
ನೃತ್ಯ - ಭರತನಾಟ್ಯ

ನರ್ತಕಿಯಾಗಿ, ಸಂಯೋಜಕಿಯಾಗಿ, ಗುರುವಾಗಿ, ಸಂಘಟಕಿಯಾಗಿ ಭರತನಾಟ್ಯ ಮಾಧ್ಯಮದಲ್ಲಿ ಡಾ.ಸುಪರ್ಣಾ ವೆಂಕಟೇಶ್ ಅವರದು ಬಹಳ ಅಭಿಮಾನದ ಹೆಸರು. ಮಂಗಳೂರಿನಲ್ಲಿ ಗುರು ಶ್ರೀ ರಾಮಕೃಷ್ಣ ಆಳ್ವ ಮತ್ತು ಶ್ರೀಮತಿ ಜಯಲಕ್ಷ್ಮೀ ಆಳ್ವ ದಂಪತಿಗಳ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡಿ 1981ರಲ್ಲಿ ಯಶಸ್ವೀ ರಂಗಪ್ರವೇಶ ಮಾಡಿದ್ದಾರೆ. ಬೆಂಗಳೂರಿಗೆ ಬಂದಮೇಲೆ ಹಿರಿಯ ಗುರುಗಳಾದ ಶ್ರೀಮತಿ ನರ್ಮದಾ ಅವರಲ್ಲಿ ತಮ್ಮ ಕಲಿಕೆಯನ್ನು ಮುಂದುವರಿಸಿದರು. ನಂತರ ಮತ್ತೋರ್ವ ಹಿರಿಯ ಗುರು ಡಾ. ಮಾಯಾರಾವ್ ಮತ್ತು ಶ್ರೀಮತಿ ಚಿತ್ರಾ ವೇಣುಗೋಪಾಲ್ ಅವರುಗಳ ಮಾರ್ಗದರ್ಶನದಲ್ಲಿ ಕಥಕ್ ನೃತ್ಯಶೈಲಿಯನ್ನು ಅಭ್ಯಾಸ ಮಾಡಿ ಎರಡೂ ಶೈಲಿಗಳಲ್ಲಿ ಪ್ರತಿಷ್ಟಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಡಾ. ಸುಪರ್ಣಾ ವೆಂಕಟೇಶ್ ನಂ.1528/16, 9ನೇ ಮುಖ್ಯ ರಸ್ತೆ, ಬಿ ಬ್ಲಾಕ್ 2ನೇ ಹಂತ, ರಾಜಾಜಿನಗರ ಬೆಂಗಳೂರು-560010 ದೂ: 93430 22454

ಶ್ರೀ ಎನ್. ನಾಗಭೂಷಣ್, ಬೆಂಗಳೂರು
ನೃತ್ಯ - ಭರತನಾಟ್ಯ

ಭರವಸೆಯ ಯುವ ಪುರುಷ ನೃತ್ಯಕಲಾವಿದರಲ್ಲಿ ಒಬ್ಬರಾಗಿರುವ ಶ್ರೀ ಎನ್.ನಾಗಭೂಷಣ್ ಕಲಾಮಂಡಲಂ ಶ್ರೀಮತಿ ಉಷಾ ದಾತಾರ್ಮತ್ತು ಶ್ರೀಮತಿ ಗೀತಾ ಅನಂತನಾರಾಯಣ ಅವರ ಮಾರ್ಗದರ್ಶನದಲ್ಲಿ ಕ್ರಮಬದ್ಧ ನೃತ್ಯ ಶಿಕ್ಷಣ ಪಡೆದು, 1984ರಲ್ಲಿ ಬೆಂಗಳೂರಿನಲ್ಲಿ ತಮ್ಮದೇ `ಆರಾಧನಾ ಸ್ಕೂಲ್ ಆ¥ಫ್ ಡಾನ್ಸ್’ ಭರತನಾಟ್ಯ ಶಾಲೆಯನ್ನು ಆರಂಭಿಸಿದರು. ಇವರ ಮಾರ್ಗದರ್ಶನದಲ್ಲಿ ನೂರಕ್ಕೂ ಹೆಚ್ಚುವಿದ್ಯಾರ್ಥಿಗಳು `ಕಲಾಕ್ಷೇತ್ರ’ ಶೈಲಿಯ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಗಭೂಷಣ್ ಅವರ ಮಾರ್ಗದರ್ಶನದಲ್ಲಿ ಯಶಸ್ವೀ ರಂಗಪ್ರವೇಶ ಮಾಡಿ, ನೃತ್ಯ ಮಾಧ್ಯಮದಲ್ಲಿ ಭರವಸೆಯನ್ನು ಮೂಡಿಸಿದ್ದಾರೆ.

ಶ್ರೀ ಎನ್.ನಾಗಭೂಷಣ್ ನಂ.155, ನಾಗಶೆಟ್ಟಿಹಳ್ಳಿ, ಸಂಜಯನಗರ, ಆರ್.ಎಂ.ವಿ. 2ನೇ ಹಂತ,
ಬೆಂಗಳೂರು - 560094 ದೂ: 90087 64839

ಶ್ರೀ ಎಸ್. ಕೇಶವಕುಮಾರ್, ಶಿವಮೊಗ್ಗ
ನೃತ್ಯ - ಭರತನಾಟ್ಯ

ಶ್ರೀ ಎಸ್. ಕೇಶವಕುಮಾರ್ ದಿನಾಂಕ 02.10.1965ರಂದು ಶ್ರೀಮತಿ ಅನಸೂಯಮ್ಮ ಮತ್ತು ಶ್ರೀ ಬಿ.ಎ. ಸೆಲ್ವ ಅರಸು ದಂಪತಿಗಳ ಪುತ್ರರಾಗಿ ಜನಿಸಿದರು. ಕನ್ನಡದಲ್ಲಿ ಎಂ.ಎ. ಮತ್ತು ಭರತನಾಟ್ಯದಲ್ಲಿ ಎಂ.ಡಾನ್ಸ್ ಪದವಿಗಳನ್ನು ಗಳಿಸಿದ್ದಾರೆ. ಶ್ರೀಮತಿ ಶ್ರೀವಲ್ಲಿ ಅಂಬರೀಷ್ ಮತ್ತು ಶ್ರೀಮತಿ ಬೃಂದಾ ಕೃಷ್ಣ ಅಯ್ಯಂಗಾರ್ ಭರತನಾಟ್ಯದಲ್ಲಿ ಕೇಶವ ಕುಮಾರ್ ಅವರ ಗುರುಗಳು. ಶ್ರೀ ರಾಧಾಕೃಷ್ಣ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ.

ಶ್ರೀ ಎಸ್. ಕೇಶವಕುಮಾರ್ ನಟನಂ ಬಾಲನಾಟ್ಯ ಕೇಂದ್ರ ,1ನೇ ಅಡ್ಡರಸ್ತೆ, ಚಾನಲ್ ಏರಿಯಾ,ರಾಜೇಂದ್ರನಗರ ಶಿವಮೊಗ್ಗ-577 204 ದೂ: 94487 92054

ಶ್ರೀಮತಿ ಕೆ.ಎಂ. ಕುಸುಮ, ಬೆಂಗಳೂರು
ಸುಗಮ ಸಂಗೀತ

ಅಂತರರಾಷ್ಟ್ರೀಯ ಮಟ್ಟದ ಸುಗಮ ಸಂಗೀತ ಕಲಾವಿದೆಯಾಗಿ, ಕನ್ನಡ ಸಿನಿಮಾ ಕ್ಷೇತ್ರದ ಹಿನ್ನೆಲೆ ಗಾಯಕಿಯಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಕೆ.ಎಂ. ಕುಸುಮಾ, ಈವರೆಗೂ ಸುಗಮಸಂಗೀತ, ದಾಸವಾಣಿ ಮತ್ತು ಭಜನೆಗಳ ಸುಮಾರು 2000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದೇಶದ ಪ್ರಮುಖ ಉತ್ಸವಗಳಲ್ಲಿ ನೀಡಿರುವುದಲ್ಲದೆ, ಇಂಡೋನೇಷಿಯಾ ಮತ್ತು ಸಿಂಗಾಪೂರ್ ದೇಶಗಳಲ್ಲೂ ಹಾಡಿದ್ದಾರೆ.

ಶ್ರೀಮತಿ ಕೆ.ಎನ್. ಕುಸುಮ 791, 7ನೇ ಮುಖ್ಯ ರಸ್ತೆ, ಎಂ.ಸಿ. ಲೇಔಟ್, ವಿಜಯನಗರ,
ಬೆಂಗಳೂರು-560 040 ದೂ: 98452 93062

ಶ್ರೀ ಟಿ. ರಾಜಾರಾಮ್, ದಾವಣಗೆರೆ
ಸುಗಮ ಸಂಗೀತ

ಶ್ರೀ ಟಿ.ರಾಜಾರಾಮ್ ಅವರು ದಿನಾಂಕ 05.08.1958ರಂದು ಶ್ರೀ ಟಿ.ಎಚ್. ಪ್ರಹ್ಲಾದ್ ಮತ್ತು ಶ್ರೀಮತಿ ಟಿ. ರಕುಮಾಬಾಯಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ವಿದ್ವಾನ್ ಶ್ರೀ ಎಸ್.ಆರ್. ಆರಾಧ್ಯರವರಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಶ್ರೀ ಪದ್ಮಚರಣ್ ಮತ್ತು ಶ್ರೀ ಹೆಚ್.ಕೆ.ನಾರಾಯಣ್ ಅವರಲ್ಲಿ ಸುಗಮ ಸಂಗೀತ ಶಿಕ್ಷಣ ಪಡೆದರು. ಆದರ್ಶ ಫಿûಲಂ ಇನ್ಸ್ಟಿಟ್ಯೂಟ್‍ನಲ್ಲಿ ಹಿನ್ನೆಲೆ ಗಾಯನದಲ್ಲಿ ತರಬೇತಿ ಪಡೆದು,ಕೆಲವು ಚಲನಚಿತ್ರಗಳಲ್ಲಿ ಹಾಡಿದ್ದಾರೆ, ಹಲವು ಧ್ವನಿಮುದ್ರಿಕೆಗಳಿಗೂ ಧ್ವನಿದಾನ ಮಾಡಿದ್ದಾರೆ. ದೂರದರ್ಶನದ ಚಂದನವಾಹಿನಿಯ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ಭಾಗವಾಗಿ ಜನಮನ್ನಣೆ ಗಳಿಸಿದ್ದಾರೆ.

ಶ್ರೀ ಟಿ. ರಾಜಾರಾಮ್ 348, ಶ್ರೀ ರಾಯರ ಕುಟೀರ, 2ನೇ ಎ ಮುಖ್ಯ ರಸ್ತೆ, 1ನೇ ಎ ಅಡ್ಡ ರಸ್ತೆ , ಉಪಕಾರ್ ರೆಸಿಡೆನ್ಸಿ ಬಡಾವಣೆ, ಆರ್.ಟಿ.ಒ. ಹತ್ತಿರ, ಉಲ್ಲಾಳು , ಬೆಂಗಳೂರು - 560 091 ದೂ: 98802 09682

ಶ್ರೀ ಎಂ.ಕಲ್ಲಿನಾಥ ಶಾಸ್ತ್ರಿ ಅಡ್ನೂರ ಗದಗ,
ಕಥಾಕೀರ್ತನೆ

ಶ್ರೀ ಕಲ್ಲಿನಾಥ ಶಾಸ್ತ್ರಿಯವರು ಶ್ರೀ ಚಿನ್ನಯ್ಯ ಮುರಗಿಮಠ ಮತ್ತು ಶ್ರೀಮತಿ ಮಹಾಲಿಂಗಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ 22.04.1955ರಂದು ಧಾರವಾಡ ಜಿಲ್ಲೆ, ನವಲಗುಂದ ತಾಲ್ಲೂಕು, ಅಡ್ನೂರ ಗ್ರಾಮದಲ್ಲಿ ಜನಿಸಿದರು. ಪದ್ಮಭೂಷಣ ಡಾ. ಎಂ. ಪುಟ್ಟರಾಜ ಕವಿ ಗವಾಯಿಗಳವರ ಸಾನಿಧ್ಯದಲ್ಲಿ ಸಂಗೀತ, ಸಾಹಿತ್ಯ ಅಧ್ಯಯನ ಮಾಡಿ, ಕಥಾಕೀರ್ತನೆ ಮತ್ತು ಪುರಾಣ ಪ್ರವಚನ ಕಲಾವಿದರಾಗಿ ನಾಡಿನ.ಒಳ ಹೊರಗೆ ಪ್ರಸಿದ್ಧಿ ಪಡೆದು, ವೃತ್ತಿ ರಂಗಭೂಮಿ ನಟರಾಗಿಯೂ ಹೆಸರು ಮಾಡಿದ್ದಾರೆ.

ಪಂ. ಎಂ. ಕಲ್ಲಿನಾಥ ಶಾಸ್ತ್ರಿ, ಅಡ್ನೂರ ಪೂರ್ಣಿಮಾ ನಿಲಯ 238/ಎ/13, ವಿವೇಕಾನಂದ ನಗರ, ಗದಗ
ದೂ: 99726 19719

ಶ್ರೀ ಹುಲಿಕಲ್ ನಾಗರಾಜ, ತುರುವೇಕೆರೆ
ಕಥಾಕೀರ್ತನೆ

ಶ್ರೀ ಹುಲಿಕಲ್ ನಾಗರಾಜ ದಿನಾಂಕ 17.11.1954ರಲ್ಲಿ ಶ್ರೀ ಪಟೇಲ್ ನಂಜಾಮರಿ ಗೌಡರ ಪುತ್ರರಾಗಿ ಜನಿಸಿದರು. ಮನೆಯಲ್ಲಿ ಸಾಂಸ್ಕೃತಿಕ ವಾತಾವರಣ ಇದ್ದುದ್ದರಿಂದ ರಾಮಾಯಣ, ಮಹಾಭಾರತ, ಭಾಗವತ, ಕಥಾ ಅವಲೋಕನ, ತಮ್ಮ ಅಜ್ಜನವರ ಗಮಕ ಪ್ರಭಾವದಿಂದ ಪೌರಾಣಿಕ ಕಥೆಗಳ ನಿರೂಪಣೆಯನ್ನು ಕರಗತ ಮಾಡಿಕೊಂಡು ವಿದ್ಯಾರ್ಥಿ ದೆಸೆಯಿಂದಲೇ ಸ್ವತಂತ್ರವಾಗಿ ಹರಿಕಥೆ ಕಾರ್ಯಕ್ರಮ ನೀಡಲು ಆರಂಭಿಸಿದರು.

ಶ್ರೀ ಹುಲಿಕಲ್ ನಾಗರಾಜ ಕಣತೂರು - 572 224 , ತುರುವೇಕೆರೆ ತಾಲೂಕು , ತುಮಕೂರು ಜಿಲ್ಲೆ
ದೂ: 99029 71417

ಶ್ರೀಮತಿ ಸತ್ಯವತಿ ರಾಮನಾಥ, ಬೆಂಗಳೂರು
ಗಮಕ

ಶ್ರೀಮತಿ ಸತ್ಯವತಿಯವರು 1951ರಲ್ಲಿ ಶ್ರೀ ಸೂರ್ಯನಾರಾಯಣಪ್ಪ ಮತ್ತು ಶ್ರೀಮತಿ ಅನಂತಲಕ್ಷ್ಮಿ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿಗಳನ್ನು ಗಳಿಸಿಕೊಂಡರು.ಮೂರು ದಶಕಗಳಿಗೂ ಹೆಚ್ಚುಕಾಲ ಅನೇಕ ವಿದ್ಯಾಲಯಗಳಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದು ಆದರ್ಶ ಶಿಕ್ಷಕಿ ಎಂದು ಹೆಸರು ಗಳಿಸುತ್ತಾರೆ.

ಶ್ರೀಮತಿ ಸತ್ಯವತಿ ರಾಮನಾಥ ನಂ.70, 203 ಸಿ ಬ್ಲಾಕ್, ಶ್ರಾವಂತಿ ಪ್ಯಾರಡೈಸ್, ಕನಕಪುರ ಮುಖ್ಯ ರಸ್ತೆ, ಜೆ.ಪಿ.ನಗರ 6ನೇ ಹಂತ ಬೆಂಗಳೂರು-560078 ದೂ: 93412 21942
Bharateeya Sangeeta Vidyalaya, Dharwad

ಭಾರತೀಯ ಸಂಗೀತ ವಿದ್ಯಾಲಯ, ಧಾರವಾಡ
ಸಂಘ - ಸಂಸ್ಥೆ

ಹಿಂದೂಸ್ತಾನಿ ಸಂಗೀತವೂ ಸೇರಿದಂತೆ ಹಲವು ಭಾರತೀಯ ಸನಾತನ ಕಲಾಮಾಧ್ಯಮಗಳಿಗೆ ಅನುಪಮ ಕೊಡುಗೆಗಳನ್ನು ನೀಡಿರುವ,ಧಾರವಾಡದಲ್ಲಿ ಕಲಾಬೆಳವಣಿಗಾಗಿ ಸುಮಾರು 85 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಭಾರತೀಯ ಸಂಗೀತ ವಿದ್ಯಾಲಯ.ಮೈಸೂರು ಮಹಾರಾಜರಿಂದ `ಸಿತಾರ ರತ್ನ’ ಎಂಬ ಗೌರವದ ಬಿರುದು ಪಡೆದಿದ್ದ `ಸೂರ್ ಹಿ ಈಶ್ವರ್’ ಎಂದು ಪ್ರತಿಪಾದಿಸಿದ ಪ್ರಖ್ಯಾತ ಸಿತಾರ್ ವಿದ್ವಾಂಸರಾದ ಉಸ್ತಾದ್ ರಹಮತ್ ಖಾನ್ ಅವರು ಈ ಸಂಸ್ಥೆಯ ಸಂಸ್ಥಾಪಕರು. ದೇಶದ ಪ್ರತಿಭಾವಂತ ಸಂಗೀತ ಕಲಾವಿದರು ಮತ್ತು ನೃತ್ಯ ಕಲಾವಿದರನ್ನು ಒಳಗೊಂಡು ಅತ್ಯಂತ ಪಾರದರ್ಶಕವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ ಈ ವಿದ್ಯಾಲಯ.

ಭಾರತೀಯ ಸಂಗೀತ ವಿದ್ಯಾಲಯ ,ಸ್ಟೇಷನ್ ರಸ್ತೆ, ಮಾಳಮಡ್ಡಿ ,ಧಾರವಾಡ-580 007