ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕಾರ್ಯಕ್ರಮಗಳು

ವಿಶೇಷ ಘಟಕ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡ ಕಾರ್ಯಕ್ರಮಗಳು

೧. ಸಂಗೀತ ನೃತ್ಯ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುವುದು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಇದರ ಫಲಾನುಭವಿಗಳಾಗುತ್ತಾರೆ.

೨. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗುರುಗಳ ಮೂಲಕ ಗುರು-ಶಿಷ್ಯ ಪರಂಪರೆಯೊಜನೆಯಡಿ ೩ ತಿಂಗಳ ಶಿಬಿರವನ್ನು ನಡೆಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಇದರ ಫಲಾನುಭವಿಗಳಾಗುತ್ತಾರೆ.

೩. ಸಂಗೀತ ನೃತ್ಯಕ್ಕೆ ಸಂಭದಿಸಿದಂತೆ ಒಂದು ವಾರದ ಶಿಬಿರವನ್ನು ನಡೆಸಲಾಗುವುದು.
ಸದರಿ ಶಿಬಿರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮತ್ತು ಕಲಾವಿದರು ಇದರ ಫಲಾನುಭವಿಗಳಾಗುತ್ತಾರೆ.

೪. ಸಂಗೀತ ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರಾದ ಶ್ರೀ ಮಾರುತಿ ಭಜಂತ್ರಿ , ಶ್ರೀ ಬಸಪ್ಪ ಹೆಚ್ ಭಜಂತ್ರಿ , ರಾಮಣ್ಣ ಭಜಂತ್ರಿ, ಶ್ರೀ ಮೃತ್ಯುಂಜಯ ಅಗಡಿ ಹಾಗೂ ಶ್ರೀಮತಿ ಶಕುಂತಲಾ ಹನುಮಂತಪ್ಪ ಅವರು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.

೫. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಂಶೋಧನಾರ್ಥಿಗಳಿಗೆ ಸಂದರ್ಶನ ಮಾಡಿ , ಆಯ್ಕೆ ಮಾಡಿ ಫೆಲೋಶಿಪ್ ನೀಡಲಾಗಿದೆ.