ಅಕಾಡೆಮಿ – ಕಲಾ ಪ್ರಕಾರಗಳು

ಕರ್ನಾಟಕ ಶಾಸ್ತ್ರೀಯ ಸಂಗೀತ

  • ಹಾಡುಗಾರಿಕೆ (ಗಾಯನ)
  • ವಾದ್ಯ ಸಂಗೀತ ಮತ್ತೊಂದು ವಿಭಾಗವೆಂದರೆ ತಾಳವಾದ್ಯ ಶೈಲಿ ಇವುಗಳನ್ನು ಜನ ಸಾಮಾನ್ಯರಲ್ಲಿ ತಿಳಿಯಪಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ

ಈ ಪ್ರಕಾರದಲ್ಲಿ ಎರಡು ವಿಶಿಷ್ಟ ವಿಭಾಗಗಳಿವೆ. ಆದರೆ ತಾಳವಾದ್ಯದಲ್ಲಿ ಹೆಚ್ಚಾಗಿ ಬಳಕೆ ಇರುವುದು ತಬಲ ಮಾತ್ರ. ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಶೈಲಿಗೆ ಹೆಚ್ಚು ಹೊತ್ತು ಸಿಗುತ್ತಿದೆ. ನಮ್ಮ ಅಕಾಡೆಮಿಯು ಇದರ ಸೂಕ್ಷ್ಮತೆಯನ್ನು ಕರ್ನಾಟಕ ಸಂಗೀತದ ಪ್ರಾಬಲ್ಯವಿರುವ ಸ್ಥಳಗಳಲ್ಲೂ ತಿಳಿಯಪಡಿಸಲು, ಹಾಗೆ ಕರ್ನಾಟಕ ಸಂಗೀತ ಅಭಿರುಚಿಯನ್ನು ಹಿಂದೂಸ್ತಾನಿ ಸಂಗೀತ ಪ್ರಾಬಲ್ಯದ ಪ್ರದೇಶದಲ್ಲೂ ಬೆಳೆಸಲು ನಿರತವಾಗಿದೆ.

ಸುಗಮ ಸಂಗೀತ

ಇತ್ತೀಚಿಗೆ ಹೆಚ್ಚು ಪ್ರಚಾರಗೊಳ್ಳುತ್ತಿರುವ ಹಾಗೂ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳೆರಡಲ್ಲೂ ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದು ಎಲ್ಲರಿಗೂ ವೇದ್ಯ. ಈ ಪ್ರಕಾರದಲ್ಲಿ ಗಮನಿಸಬೇಕಾದ ಅಂಶವೆಂದರೆ ಇದನ್ನು ಅವಲಂಬಿಸಿರುವವರಲ್ಲಿ ಹೆಚ್ಚು ಯುವ ಜನಾಂಗವನ್ನು ಕಾಣಬಹುದು. ಅಕಾಡೆಮಿಯು ಈ ಶೈಲಿಗೆ ಪುಷ್ಟಿ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಥಾಕೀರ್ತನ

ಧಾರ್ಮಿಕ ವಿಷಯಗಳನ್ನು ಕುರಿತ ಈ ಪ್ರವಚನ ಪ್ರಕಾರ ಇದರಲ್ಲಿರುವ ಸಾಹಿತ್ಯ ಮತ್ತು ಸಂಗೀತದಿಂದಾಗಿ ಅತೀ ಪ್ರಾಚೀನ ಮತ್ತು ಶಕ್ತಿಯುತವಾದ ಒಂದು ಮಾಧ್ಯಮವಾಗಿದೆ. ನಮ್ಮ ರಾಜ್ಯದಲ್ಲಿ ಈ ಪ್ರವಚನ ಕಲೆಯನ್ನು ಬೆಳೆಸಿ ಉಳಿಸಿದ ಕೀರ್ತನಕಾರರು ಅನೇಕ. ಇತ್ತೀಚಿಗೆ ಹಲವಾರು ಹೊಸ ಪ್ರತಿಭೆಗಳು ಈ ಮಾಧ್ಯಮದಲ್ಲಿ ಕಂಡು ಬರುತ್ತಿರುವುದು ಆಶಾದಾಯಕವಾಗಿದ್ದು, ಅಕಾಡೆಮಿಯು ಇದರ ವಿಕಾಸಕ್ಕಾಗಿಯೂ ಪ್ರತ್ಯೇಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಗಮಕ

ಈ ಕಲಾ ಪ್ರಕಾರವನ್ನು ಕಥಾಕೀರ್ತನದಂತೆಯೇ ಪಾರಂಪರಿಕವೆನ್ನಬಹುದು. ಗಮಕ ವಾಚನದ ಜೊತೆ ವ್ಯಾಖ್ಯಾನಕ್ಕೂ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಇದರ ಮೂಲಕ ಹಲವಾರು ಪ್ರಾಚೀನ ಮತ್ತು ನವೀನ ಕಾವ್ಯ ರಚನೆಗಳು ಜನ ಸಾಮಾನ್ಯರನ್ನು ತಲುಪಲು ಸಾಧ್ಯವಾಗಿವೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಇದಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಲು ಸಾಧ್ಯವಾಗಿದೆ.

ನೃತ್ಯ

ಕರ್ನಾಟಕ ರಾಜ್ಯದಲ್ಲಿ ಭರತನಾಟ್ಯವು ಪರಂಪರಾಗತವಾಗಿ ಬೆಳೆದು ಬಂದಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಪ್ರಚಲಿತವಿರುವ ಭರತನಾಟ್ಯ, ಕೂಚುಪುಡಿ, ಕಥಕ್, ಮೋಹಿನಿಯಾಟ್ಟಂ, ಕಥಕ್ಕಳಿ, ಓಡಿಸ್ಸಿ ಮುಂತಾದ ವೈವಿಧ್ಯಪೂರ್ಣ ಶೈಲಿಗಳೆಲ್ಲ ಅಕಾಡೆಮಿಯ ವಿವಿಧ ಕಾರ್ಯಕ್ರಮಗಳಲ್ಲಿ ಸೂಕ್ತವಾಗಿ ಪ್ರಾತಿನಿಧ್ಯವನ್ನು ಪಡೆಯುತ್ತಾ ಪುರೋಭಿವೃದ್ಧಿಯತ್ತಾ ಮುನ್ನೆಡೆಯುತ್ತಿದೆ.